ಮೂತ್ರಪಿಂಡಗಳು ಮನುಷ್ಯನ ದೇಹದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ; ಅವು ರಕ್ತ ಶುದ್ದಿ ಮಾಡುತ್ತವೆ, ದೇಹದ ತೂಕ ನಿರ್ವಹಿಸುತ್ತವೆ ಮತ್ತು ರಕ್ತದೊತ್ತಡ ಸಮತೋಲನಗೊಳಿಸುತ್ತವೆ. ಆದರೆ, ಮೂತ್ರಪಿಂಡಗಳು ಅವುಗಳ ಕಾರ್ಯಾಚರಣೆ ಸಾಮರ್ಥ್ಯ ಕಳೆದುಕೊಂಡಾಗ, ಮನುಷ್ಯನ ದೇಹ ಹದಗೆಡುತ್ತಾ ಹೋದುತ್ತದೆ. ಮೂತ್ರಪಿಂಡಗಳ ಕಾರ್ಯಾಚರಣೆಯ ನಿಧಾನ ನಷ್ಟವನ್ನು ದೀರ್ಘಾವಧಿ ಮೂತ್ರಪಿಂಡ ರೋಗ (CKD) ಎಂದು ಕರೆಯಲಾಗುತ್ತದೆ. ಮೂತ್ರಪಿಂಡಗಳು ಕಾರ್ಯಾಚರಣೆ ಮಾಡುವ ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡು ರಕ್ತದಿಂದ ತ್ಯಾಜ್ಯವನ್ನು ಹೊರಹಾಕದಿರುವುದರಿಂದ, ದೇಹದ ದ್ರವಸಂಗ್ರಹವಾಗುತ್ತಿರುತ್ತದೆ. ಭಾರತವು ಮೂತ್ರಪಿಂಡ ರೋಗದಲ್ಲಿ ಗಣನೀಯ ಏರಿಕೆ ಕಂಡಿದೆ; ನೆಫ್ರಾಲಜಿಯ ಅಂತರರಾಷ್ಟ್ರೀಯ ಸಂಸ್ಥೆಯ ಮೂತ್ರಪಿಂಡ ರೋಗ ಡೇಟಾ ಸೆಂಟರ್ ಅಧ್ಯಯನದಿಂದ ಬಂದ ಮಾಹಿತಿ ಪ್ರಕಾರ (International Society of Nephrology’s Kidney Disease Data Centre Study), 17% ಪ್ರಚಲಿತತೆ ಇರುವುದಾಗಿ ವರದಿ ಮಾಡಿದೆ.
ಯಾರು ಮೂತ್ರಪಿಂಡ ರೋಗದ ಅಧಿಕ ಅಪಾಯ ಹೊಂದಿರುತ್ತಾರೆ?
ಯಾರಿಗೇ ಆದರೂ ಯಾವುದೇ ವಯಸ್ಸಿನಲ್ಲೇ ಆದರೂ ಮೂತ್ರಪಿಂಡ ರೋಗ ಬರಬಹುದು; ಆದರೆ, ಮಧುಮೇಹ, ಏರುರಕ್ತದೊತ್ತಡ, ಆಟೋಇಮ್ಯುನ್ ಕಾಯಿಲೆಗಳು, ಗ್ಲಾಮೆರುಲೊನೆಫ್ರೈಟಿಸ್, ಪಾಲಿಸಿಸ್ಟಿಕ್ ಮೂತ್ರಪಿಂಡ ರೋಗ, ನೋವುನಿವಾರಕಗಳ ಅಧಿಕ ಬಳಕೆ, ಅಥವಾ ಮೂತ್ರಪಿಂಡ ರೋಗದ ಕುಟುಂಬ ಇತಿಹಾಸವಿರುವವರು ಅಧಿಕ ಅಪಾಯದಲ್ಲಿರುತ್ತಾರೆ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ, ಏರುರಕ್ತದೊತ್ತಡ ಪ್ರಚಲಿತತೆಯು 46.7%, ಇದ್ದರೆ ಮಧುಮೇಹದೊಂದಿಗೆ ಜೀವಿಸುವ ಜನಸಂಖ್ಯೆಯ ಪ್ರಮಾಣ 11.4%ರಷ್ಟಿದ್ದು, ಇದು ದೇಶದಲ್ಲಿ ರೋಗದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
ಮೂತ್ರಪಿಂಡ ವೈಫಲ್ಯದ ವಿವಿಧ ಹಂತಗಳು, ರೋಗಲಕ್ಷಣಗಳು ಮತ್ತು ಚಿಕಿತ್ಸೆ
ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸದಿರಬಹುದು, ಆದರೆ ರೋಗ ಪ್ರಗತಿಹೊಂದುತ್ತಿದ್ದಂತೆ, ಕೆಳಕಂಡ ರೋಗಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಬಹುದು:
- ವಿಪರೀತ ನಿತ್ರಾಣ ಮತ್ತು ದೌರ್ಬಲ್ಯ
- ಹೊಟ್ಟೆಹಸಿವಾಗದಿರುವಿಕೆ
- ಮುಖ, ಕೈ ಮತ್ತು ಕಾಲುಗಳ ಊತ
- ಮೂತ್ರವಿಸರ್ಜನೆಯಲ್ಲಿ ಬದಲಾವಣೆ
ಕುಂದಾಪುರದ ನೆಫ್ರೋಪ್ಲಸ್ ಮತ್ತು ಚಿನ್ಮಯ್ ಹಾಸ್ಪಿಟಲ್‌ನ ಸಮಾಲೊಚಕ ನೆಫ್ರಾಲಜಿಸ್ಟ್ ಆದ ಡಾ. ಸಂತೋಷ್ ಪೈ ಬಿ.ಎಚ್. MBBS, DNB (Medicine), ರವರು ಮೂತ್ರಪಿಂಡದ ಕಾಯಿಲೆಯ ಬಗ್ಗೆ ಹೀಗೆ ವಿವರಿಸುತ್ತಾರೆ “ಆರಂಭಿಕ ಹಂತಗಳಲ್ಲಿ ವೈದ್ಯರು ಡಯಾಲಿಸಿಸ್ ಪ್ರಾರಂಭಿಸದಿರಬಹುದು ಮತ್ತು ಏರುರಕ್ತದೊತ್ತಡ ಮತ್ತು ಮಧುಮೇಹದಂತಹ ಮೂಲ ಕಾರಣಗಳಿಗೆ ಚಿಕಿತ್ಸೆ ನೀಡುವ ಮೂಲಕ ಸಿಕೆಡಿಯನ್ನು ನಿಯಂತ್ರಿಸಲು ಪ್ರಯತ್ನಿಸಬಹುದು. ಔಷಧಗಳ ಜೊತೆಗೆ, ಆಹಾರ ನಿಯಂತ್ರಣ ಮತ್ತು ನಿಯಮಿತ ವ್ಯಾಯಾಮ ಮುಂತಾದ ಕ್ರಮಗಳನ್ನು ಶಿಫಾರಸು ಮಾಡಬಹುದು. ಆದರೆ, ಮೂರು ತಿಂಗಳ ನಂತರವೂ ಮೂತ್ರಪಿಂಡ ರೋಗ ನಿಯಂತ್ರಣವಾಗದಿದ್ದರೆ ಡಯಾಲಿಸಿಸ್ ಪ್ರಾರಂಭಿಸಬೇಕಾಗುತ್ತದೆ ” .ಡಯಾಲಿಸಿಸ ಅನ್ನು ಎರಡು ವಿಧಗಳನ್ನಾಗಿ ವಿಂಗಡಿಸಬಹುದು : ಆಸ್ಪತ್ರೆಯಲ್ಲಿ ನೆರವೇರಿಸುವ ಹೀಮೋಡಯಾಲಿಸಿಸ್, ಮತ್ತು ಮನೆಯಲ್ಲೇ ಮಾಡಿಕೊಳ್ಳಬಹುದಾದ ಪೆರಿಟೋನಿಯಲ್ ಡಯಾಲಿಸಿಸ್”
“ಡಯಾಲಿಸಿಸ್ ತಂತ್ರಗಳ ಆಧುನೀಕರಣದೊಂದಿಗೆ ಮೂತ್ರಪಿಂಡದ ರೋಗಿಗಳು ಬಹಳ ಸಮಯದವರೆಗೆ ಆರೋಗ್ಯಕರ ಜೀವನ ನಡೆಸಬಹುದಾಗಿದೆ. ಮತ್ತು ವಿಪರೀತದ ಸಂದರ್ಭಗಳಲ್ಲಿ ಮಾತ್ರ ಅವರಿಗೆ ಮೂತ್ರಪಿಂಡ ಮರುಜೋಡಣೆಯ ಅಗತ್ಯವಿರುತ್ತದೆ.” ಎಂದು ಹೇಳಿದರು.
ತ್ರಪಿಂಡದ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಆದ್ದರಿಂದಲೇ ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸುತ್ತಲಿರಬೇಕು. ಮೂತ್ರಪಿಂಡದ ಕಾಯಿಲೆಯನ್ನು ಗದ ಹಂತದ ಆಧಾರದ ಮೇಲೆ, ಚಿಕಿತ್ಸೆ ಪ್ರಾರಂಭಿಸಬೇಕಾಗುತ್ತದೆ . ಆರಂಭಿಕ ಹಂತಗಳಲ್ಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬಹುದಾದ ಕೆಲವು ವಿಧಾನಗಳೆಂದರೆ:
- ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ
- ಆರೋಗ್ಯಕರ ಆಹಾರ ಸೇವನೆ
- ಉಪ್ಪು ಸೇವನೆ(ಬಳಕೆ) ಕಡಿಮೆ ಮಾಡುವುದು
ವಿವಿಧ ಹಂತಗಳಲ್ಲಿ ಮೂತ್ರಪಿಂಡದ ಕಾಯಿಲೆಯನ್ನು ನಿರ್ವಹಿಸುವುದಕ್ಕೆ ಜೀವನಶೈಲಿ ಮತ್ತು ಆಹಾರಕ್ರಮ ಮಾರ್ಗಸೂಚಿಗಳು
ಮೂತ್ರಪಿಂಡದ ಕಾಯಿಲೆಯನ್ನು ಪತ್ತೆಹಚ್ಚಲಾಗಿರುವ ವ್ಯಕ್ತಿಗಳು ಪ್ರತಿನಿತ್ಯ 1500-2000 mg. ಸೋಡಿಯಮ್(ಉಪ್ಪು) ಸೇವಿಸುವುದು ಒಳ್ಳೆಯದು. ಅಂದರೆ, ಇದರ ಪ್ರಮಾಣ 3.75-5 ಗ್ರಾಂ ಉಪ್ಪು. ಅಧಿಕ ಉಪ್ಪು ಬಿಪಿ ಹೆಚ್ಚಿಸಬಹುದು, ದೇಹದದಲ್ಲಿ ದ್ರವಗಳು ಸೇರಿಕೊಳ್ಳುವಂತೆ ಮಾಡಬಹುದು ಮತ್ತು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಹಾಕಬಹುದು. ಪ್ರೋಟೀನ್ ಸೇವನೆ ಕುರಿತು ವಿಶೇಷ ಕಾಳಜಿ ವಹಿಸುವುದೂ ಬಹಳ ಮುಖ್ಯ. ಅಧಿಕ ಪ್ರೋಟೀನ್ ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಹಾಕುತ್ತದೆ. ಪ್ರೋಟೀನ್ ಸೇವನೆಯ ಪ್ರಮಾಣವು, ಮೂತ್ರಪಿಂಡದ ಕಾಯಿಲೆಯ ಹಂತ, ಡಯಾಲಿಸಿಸ್ ಪರಿಸ್ಥಿತಿ ಹಾಗೂ ಇತರ ಆರೋಗ್ಯ ಪರಿಸ್ಥಿತಿಗಳ ಮೇಲೆ ಅಲವಂಬಿಸಿರುತ್ತದೆ.
“ಮೂತ್ರಪಿಂಡದ ಕಾಯಿಲೆಗೆ (ಹಂತ 3-5)ಪ್ರೋಟೀನ್ ಸೇವನೆಯು ಪ್ರತಿ ಒಂದು ಕಿಲೋ ದೇಹದ ತೂಕಕ್ಕೆ 0.8 ಗ್ರಾಂಗಿಂತ ಹೆಚ್ಚಿಗೆ ಇರಕೂಡದು. ಉದಾಹರಣೆಗೆ ದೇಹದ ತೂಕವು 70 ಕಿಲೊ ಇದ್ದರೆ, ಪ್ರೋಟೀನ್ ಸೇವನೆಯು ಸರಿಸುಮಾರು 56 ಗ್ರಾಂ ಆಗಿರುತ್ತದೆ.
ಡಯಾಲಿಸಿಸ್‌ಗೆ ಒಳಗಾಗುತ್ತಿರುವವರು ಪ್ರತಿ ಒಂದು ಕಿಲೋ ದೇಹದ ತೂಕಕ್ಕೆ10.-12 ಗ್ರಾಂಗಿಂತ ಹೆಚ್ಚು ಇರಬಾರದು. ಉದಾಹರಣೆಗೆ ದೇಹದ ತೂಕವು 70 ಕಿಲೋ ಇದ್ದರೆ, ಪ್ರೋಟೀನ್ ಸೇವನೆಯ ಪ್ರಮಾಣ ಸರಿಸುಮಾರು 70-84 ಆಗಿರಬೇಕು.”
ಮೂತ್ರಪಿಂಡದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ತಡೆಗಟ್ಟಲು ಶಿಸ್ತಿನ ಜೀವನಶೈಲಿ ಪಾಲಿಸುವುದು ಬಹಳ ಮುಖ್ಯ. ಒಂದು ವಾರದಲ್ಲಿ ಕನಿಷ್ಟ 150 ನಿಮಿಷಗಳವರೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು (ವಾರದಲ್ಲಿ 5 ದಿನಗಳು, ಪ್ರತಿದಿನ 30 ನಿಮಿಷಗಳವರೆಗೆ). ಮಧ್ಯಮ ತೀವ್ರತೆಯ ವ್ಯಾಯಾಮಗಳನ್ನು(ನಡಿಗೆ, ಸೈಕ್ಲಿಂಗ್, ಯೋಗ) ಮಾಡಿ. ಧೂಮಪಾನ ಮತ್ತು ಮದ್ಯದಿಂದ ದೂರವಿರಿ. ಏಕೆಂದರೆ ಎರಡೂ ಮೂತ್ರಪಿಂಡ ಕಾರ್ಯಾಚರಣೆಯನ್ನು ಇನ್ನಷ್ಟು ಹಾಳುಮಾಡುತ್ತವೆ. ನಿಯಮಿತವಾದ ಆರೋಗ್ಯ ತಪಾಸಣೆ ಮಾಡಿಸಿ. ಈ ರೀತಿಯ ತಪಾಸಣೆಯು ಮಧುಮೇಹ ಅಥವಾ ಏರುರಕ್ತದೊತ್ತಡ ಇರುವವರಿಗೆ ವಿಶೇಷವಾಗಿ ಬಹಳ ಮುಖ್ಯವಾಗುತ್ತದೆ. ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮುನ್ನ ಬಹಳ ಎಚ್ಚರಿಕೆ ವಹಿಸುವುದು ಮತ್ತು ನೋವು ನಿವಾರಕಗಳು ಅಥವಾ NSAIDಗಳ ನಿಯಮಿತ ಬಳಕೆಯನ್ನು ತಪ್ಪಿಸುವುದು ಬಹಳ ಮುಖ್ಯ. ಯಾವುದೇ ಔಷಧ ತೆಗೆದುಕೊಳ್ಳುವ ಮುನ್ನ ದಯವಿಟ್ಟು ವೈದ್ಯರ ಸಲಹೆ ಕೇಳಿ. ಯಾವಾಗಲೂ ಆರೋಗ್ಯಕರ ತೂಕ ಕಾಪಾಡಿಕೊಳ್ಳಿ, ಏಕೆಂದರೆ, ಅಧಿಕ ತೂಕ ಮೂತ್ರಪಿಂಡದ ಕಾಯಿಲೆಗಯ ಅಪಾಯವನ್ನು ಹೆಚ್ಚಿಸುತ್ತದೆ.ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದಮೂತ್ರಪಿಂಡದ ಕಾಯಿಲೆಯಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ದೀರ್ಘಾವಧಿ ಪ್ರಯೋಜನ ಉಂಟುಮಾಡಬಲ್ಲದು.